ಮೊಳಕಾಲ್ಮುರು:-ತಾಲೂಕಿನ ಜನರ ನಿದ್ದೆಗೆಡಿಸಿದ್ದ ಕಳ್ಳರು ಹಾಡ ಹಗಲೇ ಮನೆಗಳಿಗೆ ನುಗ್ಗಿ ದರೋಡೆ ಮಾಡಿ ನಗ ನಾಣ್ಯ ಕದ್ದು ಎಸ್ಕೇಪ್ ಆಗುತ್ತಿದ್ದ ಖತರ್ನಾಕ್ ಖದೀಮರನ್ನು ಬಂಧಿಸುವಲ್ಲಿ ಮೊಳಕಾಲ್ಮುರು ಪೊಲೀಸರು ಯಶಸ್ವಿಯಾಗಿದ್ದಾರೆ. ತಾಲೂಕಿನಲ್ಲಿ ನಡೆದ ಪ್ರತ್ಯೇಕ ಮೂರು ಹಗಲು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕೂಡ್ಲಿಗಿಯ ಚಿರತಗುಂಡು ಗ್ರಾಮದ ನಾಗರಾಜ್ ಮತ್ತು ಮುತ್ತಿಗಾರಹಳ್ಳಿ ಗ್ರಾಮದ ರಾಜಣ್ಣ ಎನ್ನುವ ಇಬ್ಬರು ಕಳ್ಳರನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಬಂಧಿತರಿಂದ ಒಂದು ಜೊತೆ ಬಂಗಾರದ ಹ್ಯಾಂಗೀಸ್, 20 ಗ್ರಾಂ ಬಂಗಾರದ ನೆಕ್ಲೆಸ್, 10 ಗ್ರಾಂ ಮತ್ತು 05 ಗ್ರಾಂ ಬಂಗಾರದ ಕಿವಿಯೋಲೆ ಸೇರಿದಂತೆ ಒಟ್ಟು 40 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ 35,000