ಗಣೇಶೋತ್ಸವದಲ್ಲಿ ಕಲ್ಲು ತೂರಾಟ ವಿಚಾರಕ್ಕೆ ಸಂಬಂಧಿಸಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಬುಧವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಶಿವಾನಂದ ಸರ್ಕಲ್ ಬಳಿ ಮಾಧ್ಯಮಗಳ ಜೊತೆ ಮಾತನಾಡಿ, ಮದ್ದೂರಿನಲ್ಲಿ ಸರ್ಕಾರದ ಓಲೈಕೆ ನೀತಿಯಿಂದ ಕಲ್ಲು ತೂರಾಟ ನಡೆದಿದೆ, ಸರ್ಕಾರ ಹಿಂದೂ ವಿರೋಧಿ ಆಗಿ ನಡೆದುಕೊಳ್ತಿದೆ. ಕಾಂಗ್ರೆಸ್ ತನ್ನ ಓಟ್ ಬ್ಯಾಂಕ್ ಹಿಡಿದಿಟ್ಟುಕೊಳ್ಳುವ ಸಲುವಾಗಿ ಹಿಂದೂಗಳಿಗೆ ತೊಂದರೆ ಮಾಡ್ತಿದೆ. ಸರ್ಕಾರ ಒಂದೇ ಕಡೆ ವಾಲಿದ್ದು, ಇಂಥ ಘಟನೆಗಳಿಗೆ ದಾರಿಯಾಗಿದೆ. ಗಣೇಶೋತ್ಸವ ವೇಳೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಗಣಪತಿ ಹಬ್ಬವನ್ನೂ ನಮ್ಮೂರಲ್ಲೇ ಮಾಡಲು ಬಿಡಲ್ಲ ಅಂದ್ರೆ ಹೇಗೆ ಎಂದು ಸರ್ಕಾರದ ವಿರುದ್ದ ಕಿಡಿಕಾರಿದರು.