ಯಾದಗಿರಿ ಜಿಲ್ಲೆಯ ಸುರಪುರ ನಗರದಲ್ಲಿ ಪ್ರಥಮ ಬಾರಿಗೆ ಪ್ರತಿಷ್ಠಾಪಿಸಲಾಗಿರುವ ಹಿಂದೂ ಮಹಾ ಗಣಪತಿ ಹತ್ತನೇ ದಿನದ ಕಾರ್ಯಕ್ರಮದಲ್ಲಿ ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ನರಸಿಂಹ ನಾಯಕ ರಾಜುಗೌಡ ಭಾಗವಹಿಸಿದ್ದರು. ಶುಕ್ರವಾರ ರಾತ್ರಿವರೆಗೆ ನಡೆದ ಕಾರ್ಯಕ್ರಮದಲ್ಲಿ ಕಾಮಿಡಿ ಕಿಲಾಡಿಗಳು ಹಾಗೂ ಸರಿಗಮಪ ಖ್ಯಾತಿಯ ಅನೇಕ ಕಲಾವಿದರು ಹಾಗೂ ಗಾಯಕರು ಭಾಗವಹಿಸಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಸುರಪುರ ನಗರದಾದ್ಯಂತ ಸಾವಿರಾರು ಸಂಖ್ಯೆಯ ಜನರು ಕೂಡ ಭಾಗವಹಿಸಿದ್ದರು. ಮುಖಂಡರಾದ ರಾಜಾ ಹನುಮಪ್ಪ ನಾಯಕ, ವೇಣು ಮಾಧವ ನಾಯಕ, ಬಲ ಭೀಮ ನಾಯಕ, ವೇಣುಗೋಪಾಲ ಜೇವರ್ಗಿ, ಮಹೇಶ್ ಪಾಟೀಲ್ ಸೇರಿ ಅನೇಕರು ಉಪಸ್ಥಿತರಿದ್ದರು.