ಶರನ್ನವರಾತ್ರಿ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಶ್ರೀ ಮಠದಲ್ಲಿ 7ನೇ ದಿನದ ದಸರಾ ದರ್ಬಾರ್ ವಿಜೃಂಭಣೆಯಿಂದ ಜರುಗಿತು. ಹರಿಹರಪುರ ಶ್ರೀ ಕ್ಷೇತ್ರದ ಜಗದ್ಗುರುಗಳಾದ ಶ್ರೀ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿಗಳವರು ಅಧಿದೇವತೆ ಶಾರದಾ ಪರಮೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಏಳನೇ ದಿನದ ಶರನ್ನವರಾತ್ರಿ ಅಂಗವಾಗಿ ಶ್ರೀ ಶಾರದಾ ಪರಮೇಶ್ವರಿ ದೇವಿಗೆ ಅಶ್ವ ವಾಹನಾಲಂಕಾರವನ್ನ ಮಾಡಿ ಪೂಜೆಯನ್ನ ಸಲ್ಲಿಸಲಾಗಿದ್ದು ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ದೇವಿಯನ್ನು ಕಣ್ತುಂಬಿಕೊಂಡರು.