ಪಟ್ಟಣದಲ್ಲಿ ಕರ್ಕಶ ಶಬ್ದವನ್ನು ಉಂಟು ಮಾಡುವುದರ ಜೊತೆಗೆ ಶಬ್ದ ಮಾಲಿನ್ಯ ಉಂಟು ಮಾಡುವ ವಿಚಿತ್ರ ವಾಹನಗಳನ್ನು ಪತ್ತೆ ಹಚ್ಚಿ ಅವುಗಳಿಗೆ ಅಳವಡಿಸಲಾದ ಸೈಲೆನ್ಸರ್ ಗಳನ್ನ ತೆಗೆಯುವ ಕಾರ್ಯ ಬುಧವಾರ ಮಧ್ಯಾನ 3:30ಕ್ಕೆ ಆರಂಭಗೊಂಡಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರ ನಿರ್ದೇಶನದ ಮೇರೆಗೆ ಅವರ ಪೊಲೀಸ್ ಹಣೆ ಪಿಎಸ್ಐ ವಸೀಮ್ ಪಟೇಲ್ ಹಾಗೂ ಸಿಬ್ಬಂದಿ ಸೇರಿ ಕಾರ್ಯಚರಣೆ ಕೈಗೊಂಡರು.