ಯಲಬುರ್ಗಾ ಪಟ್ಟಣದಲ್ಲಿ ಮುಂಬರುವ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಪೊಲೀಸ್ ಮತ್ತು ಅಧಿಕಾರಿ ಸಿಬ್ಬಂದಿಯವರಿಂದ ಪಥ ಸಂಚಲನ ನಡೆಸಲಾಯಿತು. ಆಗಸ್ಟ್22ರಂದು ಸಂಜೆ 4-30 ಗಂಟೆಗೆ ಯಲಬುರ್ಗಾ ಪಟ್ಟಣದಲ್ಲಿನ ನಾಗರಿಕರು ಶಾಂತಿ ಸೌಹಾರ್ದತೆಯಿಂದ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳನ್ನು ಆಚರಣೆ ಮಾಡಿ ನಿಮ್ಮೊಂದಿಗೆ ನಾವು ಇದ್ದೇವೆ ಎಂಬ ಸಂದೇಶ ಸಾರುವಂತೆ ಪೊಲೀಸ್ ಪಥ ಸಂಚಲನಾ ಕಾರ್ಯಕ್ರಮ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು