ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ ಮತ್ತೆ 1.80 ಲಕ್ಷ ಕ್ಯೂಸೆಕ್ ನೀರು ಬಿಡಲಾಗಿದೆ. ಇದರಿಂದ ಅಫಜಲಪುರ, ಜೇವರ್ಗಿ, ಚಿತ್ತಾಪುರ ತಾಲೂಕಿನ ಹಲವೆಡೆ ಪ್ರವಾಹದ ಭೀತಿ ಉಂಟಾಗಿದೆ. ದೇವಲಗಾಣಗಾಪುರನಲ್ಲಿರುವ ಗಾಣಗಾಪುರ- ಜೇವರ್ಗಿ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ. ಶುಕ್ರವಾರ 11 ಗಂಟೆಗೆ ಸೇತುವೆ ಮೇಲಿಂದ ನೀರು ದುಮ್ಮುಕ್ಕಿದ್ದು, ಪ್ರಾರಂಭದಲ್ಲಿ ಜನತೆ ಪ್ರಾಣಭಯದ ನಡುವೆ ನೀರಿನಲ್ಲಿ ನಡೆದುಕೊಂಡು ಹಾಗೂ ವಾಹನಗಳನ್ನು ಚಲಾಯಿಸಿಕೊಂಡು ತೆರಳಿದರು. ಆದ್ರೆ ಪೊಲೀಸ್ ಇಲಾಖೆ ಸ್ಥಳಕ್ಕೆ ದೌಡಾಯಿಸಿ ಬ್ಯಾರಿಕೇಡ ಹಾಕಿ ಜನ ಹಾಗೂ ವಾಹನ ಸಂಚಾರ ಸ್ಥಗೀತಗೊಳಿಸಿದರು. ಸಮಯ ಕಳೆದಂತೆ ನೀರಿನ ಮಟ್ಟ ಹೆಚ್ಚುತ್ತಿದೆ....