ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಸಫಾರಿಗೆ ತೆರಳಿದ ಪ್ರವಾಸಿಗರಿಗೆ ಜೀವ ಬಾಯಿಗೆ ಬಂದಂತೆ ಅನುಭವವಾದ ಘಟನೆ ಶನಿವಾರ ನಡೆದಿದೆ. ಸಫಾರಿಗೆ ತೆರಳಿದ್ದವರ ಜೀಪ್ ನ್ನು ನೋಡ ನೋಡುತ್ತಿದ್ದಂತೆ ಕಾಡಾನೆ ಮೇಲರಗಿ ಬಂದು ಅಟ್ಟಾಡಿಸಿದೆ. ಆನೆ ಕೊಟ್ಟ ಚಮಕ್ ಗೆ ಪ್ರವಾಸಿಗರಿಗೆ ಒಂದು ಕ್ಷಣ ಜೀವ ಬಾಯಿಗೆ ಬಂದಂತ ಅನುಭವವಾಗಿದೆ. ತನ್ನ ಪಾಡಿಗೆ ತಾನು ಮೇಯುತ್ತಿದ್ದ ಆನೆ ಸಫಾರಿ ವಾಹನ ಕಂಡ ಕ್ಷಣಾರ್ಧದಲ್ಲೆ ದಿಢೀರನೆ ಅಟ್ಯಾಕ್ ಮಾಡಿದ್ದು ಸಫಾರಿ ಚಾಲಕ ಸಮಯ ಪ್ರಜ್ಞೆ ಮೆರೆದು ರಿವರ್ಸ್ ನಲ್ಲಿ ಜೀಪ್ ಚಲಾಯಿಸಿದ್ದಾರೆ.