ಹನೂರು ತಾಲೂಕಿನ ಗಾಣಮಂಗಲ ಗ್ರಾಮದ ಸತೀಶ ಎಂಬಾತನು ಕಳೆದ ಒಂದು ತಿಂಗಳಿಂದ ನಾಪತ್ತೆಯಾಗಿರುವ ಕುರಿತು, ಆತನ ಅತ್ತೆ ಹನೂರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ದೂರುದಾರರ ಮಗಳು ನಾಗಮ್ಮಳನ್ನು ಸತೀಶನಿಗೆ ವಿವಾಹ ಮಾಡಿ ಕೊಡಲಾಗಿತ್ತು. ಈ ದಂಪತಿ ಕಳೆದ ನಾಲ್ಕು-ಐದು ವರ್ಷಗಳಿಂದ ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಐಸ್ ಕ್ರೀಂ ಮತ್ತು ಬಟ್ಟೆ ವ್ಯಾಪಾರ ಮಾಡುತ್ತಿದ್ದಾರೆ ಸತೀಶನು ಸಾಮಾನ್ಯವಾಗಿ ತಿಂಗಳಿಗೆ ಒಮ್ಮೆಯಾದರೂ ಗ್ರಾಮಕ್ಕೆ ಬಂದು ಹೋಗುತ್ತಿದ್ದ. ಒಂದು ತಿಂಗಳ ಹಿಂದೆ, ತನ್ನ ಮೋಟಾರ್ ಬೈಕ್ ನಲ್ಲಿ ಗಾಣಮಂಗಲಕ್ಕೆ ಬಂದು, ವ್ಯಾಪಾರ ಮಾಡುತ್ತಿದ್ದರು. ಮಾರನೆ ದಿನ ವ್ಯಾಪಾರಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೊರಟಿದ್ದ ಅವನು, ನಂತರ ಮನೆಗೆ ಮರಳಲೇ ಇಲ್ಲ. ಎಂದು ದೂರಿದ್ದಾರೆ