ಭಟ್ಕಳದ : ನಗರದ ಎ.ಕೆ ಹಫೀಜ್ಕಾ ಮೆಮೋರಿಯಲ್ ಹಾಲ್ ನಲ್ಲಿ ಭಟ್ಕಳ ಉಪ ವಿಭಾಗದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಮಾನಸಿಕ ಮತ್ತು ದೈಹಿಕ ಸದೃಢತೆ ಹಾಗೂ ಒತ್ತಡ ನಿರ್ವಹಣೆಗಾಗಿ ಹಮ್ಮಿಕೊಂಡಿದ್ದ ಕಾರ್ಯಾಗಾರವು ಭಾನುವಾರ ಸಂಜೆ 5:00 ಗಂಟೆ ಸುಮಾರಿಗೆ ಸಂಪನ್ನಗೊಂಡಿತು. ಉಪನ್ಯಾಸಕಾರಾಗಿ ಪ್ರೋ.ಪ್ರವೀಣ ವಿ.ಜಿ ರವರು ಭಾಗವಹಿಸಿ ಮಾನಸಿಕ ಒತ್ತಡ ನಿವಾರಣೆ ಹಾಗೂ ದೈಹಿಕ ಸದೃಢತೆಯ ಕುರಿತಂತೆ ಸಮಗ್ರವಾದ ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡಿದರು.