ವೇಗವಾಗಿ ಬಂದ ಕಾರು ರಸ್ತೆಯ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿರುವ ಘಟನೆ ತುಂಗಣಿ ಗೇಟ್ ಬಳಿ ನಡೆದಿದೆ. ಕನಕಪುರ - ಬೆಂಗಳೂರು ಮುಖ್ಯ ರಸ್ತೆಯ ತುಂಗಣಿ ಗೇಟ್ ಬಳಿ ಶನಿವಾರ ಅಪಘಾತ ನಡೆದಿದೆ. ಅತೀ ವೇಗವಾಗಿ ಬಂದ ಕಾರುನ ಚಾಲಕ ಕಾರನ್ನ ನಿಯಂತ್ರಣ ಮಾಡಲಾಗದೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಚಾಲಕನಿಗೆ ಗಂಭೀರ ಗಾಯವಾಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.