ದಾವಣಗೆರೆ ನಗರದಾದ್ಯಂತ ಆ.27, 29, ಮತ್ತು 31 ರಂದು ಗಣೇಶ ವಿಗ್ರಹಗಳ ವಿಸರ್ಜನೆಗೆ ಪಾಲಿಕೆ ವತಿಯಿಂದ ತಾತ್ಕಾಲಿಕ ವಿಸರ್ಜನಾ ವ್ಯವಸ್ಥಗೆ ಸ್ಥಳ ನಿಗದಿಪಡಿಸಲಾಗಿದೆ. ಸಾರ್ವಜನಿಕರು, ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಭಕ್ತರು ಪಾಲಿಕೆ ನಿಗದಿಪಡಿಸಿದ ಸ್ಥಳಗಳಲ್ಲಿಯೇ ವಿಸರ್ಜಿಸಬೇಕು ಎಂದು ಪಾಲಿಕೆ ಆಯುಕ್ತರಾದ ರೇಣುಕಾ ಅವರು ತಿಳಿಸಿದ್ದಾರೆ. ದಾವಣಗೆರೆ ನಗರದಲ್ಲಿ ಪತ್ರಿಕಾ ಪ್ರಕಟಣೆ ಮೂಲಕ ಮಂಗಳವಾರ ತಿಳಿಸಿರುವ ಅವರು, ದಾವಣಗೆರೆ ನಗರದ ಹಗೆದಿಬ್ಬ ವೃತ್ತ ಗಾಂಧಿನಗರ, ರಾಜಕುಮಾರ ಶಾಲೆ ಹತ್ತಿರ ಕುರುಬರ ಕೇರಿ, ಹೊಂಡದ ಸರ್ಕಲ್, ಮೈಲಾರ ಲಿಂಗೇಶ್ವರ ದೇವಸ್ಥಾನದ ಹತ್ತಿರ ಕೊಂಡಜ್ಜಿ ರಸ್ತೆ, ಕೋರ್ಟ್ ಮುಂಭಾಗ ದೇವರಾಜ ಅರಸು ಬಡಾವಣೆ, ಶಿವಾಜಿ ವೃತ್ತ ದುರ್ಗಾಂಭಿಕ ದೇವಸ್ಥಾನದ ಹತ್ತಿರ ಕುರುಬರ ಕೇರಿ ಇತೆರೆಡೆ