ಗಣೇಶ ವಿಸರ್ಜನೆ ವೇಳೆ ಅವಘಡ ಸಂಭವಿಸಿ ಓರ್ವ ಸ್ಥಳದಲ್ಲೇ ಸಾವನಪ್ಪಿದ್ದು ಇನ್ನಿಬ್ಬರಿಗೆ ಗಂಭೀರ ಗಾಯಗಳಾದ ಘಟಬೆ ನಗರದ ಗಾಂಧಿ ವೃತ್ತದಲ್ಲಿ ನಡೆದಿದೆ. ಶುಭಂ ಸಂಕಳ (21) ಎಂಬಾತ ಸಾವನ್ನಪ್ಪಿದರೆ, ಪ್ರಭಾಕರ ಜಂಗಲೆ (22) ಹಾಗೂ ಲಖನ್ ಚವ್ಹಾಣ (28) ಎಂಬುವರಿಗೆ ಗಾಯಗಳಾಗಿವೆ. ವಿಜಯಪುರ ನಗರದ ಡೋಬಳೆ ಗಲ್ಲಿಯ ಗಣಪತಿ ವಿಸರ್ಜನೆ ವೇಳೆ ಅವಘಡವಾಗಿದೆ. ಗಾಯಾಳುಗಳಿಗೆ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.