ಮದ್ದೂರು ತಾಲ್ಲೂಕು ಭಾರತೀನಗರದ ಸ್ಪೂರ್ತಿ ಪತ್ತಿನ ಸಹಕಾರ ಸಂಘದ ಬೆಳ್ಳಿ ಹಬ್ಬದ ಅಂಗವಾಗಿ ಪ್ರಶಾಂತ್ ಸ್ಕೂಲ್ ಆವರಣದಲ್ಲಿ ಉಚಿತ ಆರೋಗ್ಯ ಶಿಬಿರ, ಸಸಿ ವಿತರಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಬೆಂಗಳೂರು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಮಹಾಸ್ವಾಮೀಜಿ ಮಾತನಾಡಿ, ಸಹಕಾರಿ ಸಂಘಗಳಲ್ಲಿ ಠೇವಣಿ ಹೆಚ್ಚು ಮಾಡಬೇಕು. ಹಾಗಾದಲ್ಲಿ ಮಾತ್ರ ಸಹಕಾರಿ ಸಂಘಗಳ ಉಳಿವು ಸಾಧ್ಯ ಎಂದು ತಿಳಿಸಿದರು. ಸಹಾಕರಿ ತತ್ವದಡಿ ಸ್ವಾತಂತ್ರ್ಯ ಪೂರ್ವದಲ್ಲಿಯೇ ಸಹಕಾರಿ ಸಂಘಗಗಳನ್ನು ಆರಭಿಸಲಾಗಿತ್ತು. ಅಂದಿನ ಜನರಿಗೆ ಹಣಕಾಸಿನ ನೆರವನ್ನು ಸಾಲದ ಮೂಲಕ ಒದಗಿಸುವ ಉದ್ದೇಶದಿಂದ ಆರಂಭಿಸಲಾಯಿತು. ಇಂತಹ ಸಹಕಾರಿ ಸಂಘಗಳು ಜನರ ಕಷ್ಟಸುಖಗಳಿಗೆ ನೆರವಾಗಿದ್ದವು.