ಹಿಂದೂಗಳ ಸರ್ವನಾಶ ಮಾಡೋಕೆ ಅಂತಾನೆ ಇರೋದು ಸಿಎಂ ಸಿದ್ದರಾಮಯ್ಯ ಎಂದು ಶಿವಮೊಗ್ಗ ನಗರದಲ್ಲಿ ಶಾಸಕ ಎಸ್ ಎನ್ ಚನ್ನಬಸಪ್ಪ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಶನಿವಾರ ಶಿವಮೊಗ್ಗದಲ್ಲಿ ಬಿಜೆಪಿ ಘಟಕದ ವತಿಯಿಂದ ಧರ್ಮದ ಉಳಿವಿಗಾಗಿ ಧರ್ಮಯುದ್ಧ ಹೆಸರಿನಲ್ಲಿ ಪ್ರತಿಭಟನಾ ಸಭೆಯನ್ನು ನಡೆಸಲಾಯಿತು. ಈ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಧರ್ಮಸ್ಥಳದ ವಿರುದ್ಧ ಅನೇಕ ಷಡ್ಯಂತ್ರಕ್ಕೆ ಶಕ್ತಿ ಕೊಟ್ಟಿದ್ದು ಕಾಂಗ್ರೆಸ್. ಕಾಂಗ್ರೆಸ್ ಹಿಂದೂತ್ವ ಮರೆತ ಸರ್ಕಾರ. ಇವರಿಂದ ಹಿಂದುಗಳ ರಕ್ಷಣೆ ಆಗೋಲ್ಲ ಹಿಂದೂಗಳ ಸರ್ವನಾಶ ಮಾಡೋಕೆ ಅಂತ ಇರೋದು ಸಿಎಂ ಸಿದ್ದರಾಮಯ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.