. ಎನ್. ರಾಜಣ್ಣ ಅವರನ್ನ ಶೀಘ್ರ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡದಿದ್ದರೆ ದೆಹಲಿಯಲ್ಲಿ 5 ದಿನಗಳ ಕಾಲ 5 ಸಾವಿರ ಮಂದಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಡಿಸಿಸಿ ಬ್ಯಾಂಕ್ ಹಾಗೂ ಕೆ ಎಂ ಎಫ್ ನಿರ್ದೇಶಕ ನಾಗೇಶ್ ಬಾಬು ಕಾಂಗ್ರೆಸ್ ಹೈಕಮಾಂಡ್ ಗೆ ಎಚ್ಚರಿಕೆ ನೀಡಿದರು. ತುಮಕೂರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಹಿಂದುಳಿದ ವರ್ಗಗಳ ಒಕ್ಕೂಟ, ಸಾಹಿತಿಗಳು ಮತ್ತು ಕಲಾವಿದರ ಬಳಗ, ಕೆ ಎನ್ ಆರ್ ಹಾಗೂ ಆರ್ ಆರ್ ಅಭಿಮಾನಿಗಳ ಬಳಗ ಸಹಕಾರದಲ್ಲಿ ಹಮ್ಮಿಕೊಂಡಿದ್ದ ಧರಣಿ ಸತ್ಯಾ ಗ್ರಹದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರಾಜಣ್ಣ ಅವರು ಸಚಿವರಾಗಿದ್ದ ಅವಧಿಯ ಕೆಲಸ ತೃಪ್ತಿದಾಯಕವಿದ್ದರೂ ಸಹ ವಿನಾಕಾರಣ ಸಚಿವ ಸ್ಥಾನದಿಂದ ತೆಗದುಹಾಕಿದ್ದು ಸಮಂಜಸವಲ್ಲ ಎಂದು ನಾಗೇಶ್ ಬಾಬು ದೂರಿದರು.