ರಸ್ತೆಬದಿ ಅನಧಿಕೃತ ಆಯುರ್ವೇದಿಕ್, ಗಿಡಮೂಲಿಕೆ ಚಿಕಿತ್ಸಾಲಯಗಳ ಮೇಲೆ ಅಧಿಕಾರಿಗಳಿಂದ ದಾಳಿ-ತೆರವು ಕೋಲಾರ: ತಾಲ್ಲೂಕಿನಾದ್ಯಂತ ರಸ್ತೆಬದಿಗಳಲ್ಲಿ ಅಕ್ರಮವಾಗಿ ಆಯುರ್ವೇದಿಕ್ ಚಿಕಿತ್ಸಾಲಯಗಳ ಹೆಸರಿನಲ್ಲಿ ಟೆಂಟ್ಗಳನ್ನು ಹಾಕಿಕೊಂಡು ಗಿಡಮೂಲಿಕೆ ಔಷಧಿ ನೀಡುವುದಾಗಿ ಜನರನ್ನು ವಂಚಿಸುತ್ತಿದ್ದ ನಾಲ್ಕು ಕ್ಯಾಂಪ್ಗಳ ಮೇಲೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎ.ವಿ.ನಾರಾಯಣಸ್ವಾಮಿ ನೇತೃತ್ವದ ತಂಡ ಏಕಕಾಲದಲ್ಲಿ ದಾಳಿ ನಡೆಸಿ ತೆರವುಗೊಳಿಸಿತು. ತಾಲ್ಲೂಕಿನ ಚಿಕ್ಕಹಸಾಳ ಗೇಟ್, ನಗರದ ಪವನ್ ಕಾಲೇಜು ಸಮೀಪ, ನರಸಾಪುರ ಕೈಗಾರಿಕಾ ವಲಯದ ಖಾಜಿಕಲ್ಲಹಳ್ಳಿ ಗೇಟ್, ತಾಲ್ಲೂಕಿನ ಕೆಂದಟ್ಟಿ ಸಮೀಪ ಟೆಂಟ್ಗಳನ್ನು ಹಾಕಿಕೊಂಡು ವಿವಿಧ ಕಾಯಿಲೆಗಳಿಗೆ ಗಿಡ ಮೂಲಿಕೆ, ಆಯುರ್ವೇದಿಕ್ ಔಷಧಿ ನೀಡುವು ದಾಗಿ ಜನರನ್ನು ಯಾ