ಇಡಿ ದಾಳಿ ಕುರಿತು ಚಳ್ಳಕೆರೆಯಲ್ಲಿ ವಕೀಲರಾದ ಉಮೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಶುಕ್ರವಾರ ರಾತ್ರಿ 9 ಗಂಟೆಗೆ ಉಮೇಶ್ ಅವರು ಪ್ರತಿಕ್ರಿಯೆ ನೀಡಿ ಮಾತನಾಡಿದ್ದು ಇಡಿ ದಾಳಿ ಕುರಿತು ಸಂಬಂದಪಟ್ಟ ಅಧಿಕಾರಿಗಳ ಜೊತೆ ನಾನು ಮಾತನಾಡಿದ್ದೇನೆ. ಕೆ ಸಿ ನಾಗರಾಜ್ ಮನೆಯಲ್ಲಿ ಇಡಿ ಅಧಿಕಾರಿಗಳು ಶೋದ ಕಾರ್ಯ ನಡೆಸುತ್ತಿದ್ದು ತಡರಾತ್ರಿ ವೇಳೆಗೆ ಪರಿಶೀಲನೆ ನಡೆಸಿ ಹೋಗುತ್ತಾರೆ. ಇನ್ನೂ ಯಾರನ್ನಾದರು ಬಂದಿಸಬೇಕಾದರೆ ಎಫ್ ಐ ಆರ್ ಮಾಡಲೇಬೇಕಿದ್ದು ಆ ಬಗ್ಗೆ ಇನ್ನೂ ಕೂಡ ಅಂದುಕೊಂಡಿಲ್ಲ.