ರಾಯಚೂರು ತಾಲೂಕಿನ ಹುಣಸಿಹಾಳಹುಡ ಗ್ರಾಮದಲ್ಲಿ ಶ್ರಾವಣ ಮಾಸದ ಕೊನೆಯ ಶನಿವಾರದ ಅಮಾವಾಸ್ಯೆಯ ಅಂಗವಾಗಿ ಗ್ರಾಮದ ಆಂಜನೇಯ ಸ್ವಾಮಿ ಪರ್ವಕಾಲ ಮಹೋತ್ಸವ ಕಾರ್ಯಕ್ರಮ ಆಚರಿಸಲಾಯಿತು. ಈ ಸಂದರ್ಭದಲ್ಲಿ ಭಕ್ತರು ಪಕ್ಕದ ಕಾದಲೂರಿನ ಕೃಷ್ಣಾ ನದಿ ತಟದಲ್ಲಿರುವ ಉಪೇಂದ್ರ ತೀರ್ಥದಲ್ಲಿ ಪೂಜೆ ಸಲ್ಲಿಸಿ ಗ್ರಾಮಕ್ಕೆ ಮರಳಿದ ನಂತರ ಹಳೆ ಗ್ರಾಮದ ಮೂಲ ಆಂಜನೇಯ ದೇಗುಲದಲ್ಲಿ ದೀಡ ನಮಸ್ಕಾರ ಹಾಕಿ ಭಕ್ತರು ಭಕ್ತಿಯನ್ನು ಅರ್ಪಿಸಿದರು ಅಲ್ಲದೆ ಅನೇಕರು ಹೊತ್ತಿದ್ದ ಹರಕೆಯನ್ನು ಸಲ್ಲಿಸಿದರು.