ಕೆರೆಯಲ್ಲಿ ಮುಳುಗಿಸಿ ಮಹಿಳೆ ಕೊಲೆ ಮಾಡಿದ ಆರೋಪಿ ಬಂಧಿಸಿದ ವಿಜಯಪುರ ಪಟ್ಟಣದ ಪೊಲೀಸರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರದ ಚಿಕ್ಕನಹಳ್ಳಿ ಕೆರೆಯಲ್ಲಿ ಕುರಿ ಖರೀದಿಸಿದ ಬಾಕಿ ಉಳಿಸಿಕೊಂಡಿರುವ ಹಣ ಕೊಡುವುದಕ್ಕಾಗಿ ಮಹಿಳೆಯನ್ನು ಕರೆಸಿಕೊಂಡು ಚಿಕ್ಕನಹಳ್ಳಿ ಕೆರೆಯಲ್ಲಿ ಮುಳುಗಿಸಿ ಸಾಯಿಸಿದ ಆರೋಪಿಯನ್ನು ವಿಜಯಪುರ ಪೊಲೀಸರು ಬಂಧಿಸಿದ್ದಾರೆ 26 ವರ್ಷದ ಮಧು ಬಂದಿತಾರೋಪಿಯಾಗಿದ್ದು ವಿಜಯಪುರದ ಪರಶುರಾಮ ನಗರ ನಿವಾಸಿಯಾಗಿದ್ದಾನೆ