ಪಟ್ಟಣದಲ್ಲಿ ನಡೆದಂತಹ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕರಾದ ಬಾಲಕೃಷ್ಣ ಅವರು ಭಾಗಿಯಾಗಿದ್ದರು. ಪಟ್ಟಣದಲ್ಲಿ ಶಿಕ್ಷಕರ ಸಂಘ ಹಾಗೂ ಶಿಕ್ಷಣ ಇಲಾಖೆ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಶನಿವಾರ ಆಚರಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಶಾಸಕರಾದಂತ ಬಾಲಕೃಷ್ಣರವರು ಭಾಗಿಯಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯೆಯನ್ನ ಹೇಳಿಕೊಟ್ಟ ಗುರುಗಳನ್ನು ಸಂಸ್ಕಾರದಿಂದ ಕಾಣಬೇಕು ಗೌರವದಿಂದ ಕಾಣಬೇಕು ಅಂತ ಹೇಳಿ ತಿಳಿಸಿದರು.