ಕಲಬುರಗಿ : ಕಬ್ಬಿಣದ ಪೈಪ್‌ನಿಂದ ತಲೆಗೆ ಹೊಡೆದು ಲಾರಿ ಡ್ರೈವರ್‌ನನ್ನ ಬರ್ಬರವಾಗಿ ಹತ್ಯೆ ಮಾಡಿರೋ ಘಟನೆ ಕಲಬುರಗಿ ಜಿಲ್ಲೆ ಸೇಡಂ ಪಟ್ಟಣದಲ್ಲಿ ಸೆ9 ರಂದು ಬೆಳಗಿನ ಜಾವ 5 ಗಂಟೆಗೆ ನಡೆದಿದೆ.. ಪಟ್ಟಣದ ಕೆಇಬಿ ಕಾಲೋನಿ ನಿವಾಸಿ ಲಾರಿ ಮಾಲೀಕನು ಹಾಗೂ ಡ್ರೈವರ್ ಆಗಿದ್ದ ರಿಯಾಜ್ ಶೇಕ್ (43) ಎಂಬಾತನ್ನ ಜಹೀರ್ ಎಂಬಾತ ತಲೆಗೆ ಕಬ್ಬಿಣದ ಪೈಪ್‌ನಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಅನೈತಿಕ ಸಂಬಂಧ ವಿಚಾರಕ್ಕೆ ಲಾರಿ ಡ್ರೈವರ್ ರಿಯಾಜನ ಹತ್ಯೆಯಾಗಿರೋ ಶಂಕೆ ವ್ಯಕ್ತಪಡಿಗಿದ್ದು, ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.