ಹಿಂದೂ ಮಹಾಮಂಡಳಿ ಗಣೇಶ ಮೂರ್ತಿ ಮೆರವಣಿಗೆ, ನಗರದೇಲ್ಲೆಡೆ ಪೊಲೀಸ್ ಬಿಗಿ ಭದ್ರತೆ ಕಂಪ್ಲಿ ಪಟ್ಟಣದಲ್ಲಿ ಹಿಂದೂ ಮಹಾಮಂಡಳಿ ವತಿಯಿಂದ ಕೂಡಿಸಲಾದ ಹಿಂದೂ ಮಹಾ ಗಣಪತಿಯ ವಿಸರ್ಜನಾ ಮೆರವಣಿಗೆಯು ಸೆಪ್ಟೆಂಬರ್ 8, ಸೋಮವಾರ ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾಗುತ್ತಿದ್ದು, ನಗರದಲ್ಲಿ ಪೊಲೀಸ್ ಬಿಗಿ ಭದ್ರತೆ ಹೆಚ್ಚಿಸಲಾಗಿದೆ. ಬಳ್ಳಾರಿ ಜಿಲ್ಲೆಯಿಂದ ಒಟ್ಟು 300 ಕ್ಕೂ ಅಧಿಕ ಪೊಲೀಸರು ಕಂಪ್ಲಿಯಲ್ಲಿ ಭದ್ರತೆ ನೀಡಿದ್ದಾರೆ ಎನ್ನಲಾಗಿದೆ