ಜಯನಗರದ ಡಾಕ್ಟರ್ ಬಿಆರ್ ಅಂಬೇಡ್ಕರ್ ಮಕ್ಕಳ ಉದ್ಯಾನವನದಲ್ಲಿ ಯೋಧರ ಸ್ಮಾರಕದ ಬಳಿ ದೇಶಕಾಗಿ ಪ್ರಾಣ ತ್ಯಾಗ ಮಾಡಿ ಹುತಾತ್ಮರಾದ ರಾಕೇಶ್ ಕುಮಾರ್ ,ವಿಜೇಂದ್ರ ಸಿಂಗ್,ರಾಕೇಶ್ ಸಿಂಗ್, ಆಶೀಶ್ ಕುಮಾರ್, ಗುರದೀಪ ಸಿಂಗ್ ರವರ ಭಾವಚಿತಕ್ಕೆ ಮಾಲಾರ್ಪಣೆ ಮಾಡಿ ಪುಷ್ಪಾರ್ಚನೆ ಮಾಡಿ ದೀಪ ಬೆಳಗಿಸಿ ಮೌನ ಆಚರಿಸಿ ಭಾನುವಾರ ಶ್ರದ್ಧಾಂಜಲಿ ಅರ್ಪಿಸಿದರು. ಈ ಸಂದರ್ಭದಲ್ಲಿ ನಗರ ಸಭೆ ಸದಸ್ಯರಾದ ಮುರಳಿ ಗೌಡ ಮಾತನಾಡಿ ಯೋಧರೆಂದರೆ ದೇಶದ ನಿಜವಾದ ನಾಯಕರು ಯೋಧರು ಗಡಿ ಕಾಯುವ ಕೆಲಮಾಡದಿದ್ದರೆ ನಾವು ನಮ್ಮವರೊಂದಿಗೆ ಸಂತೋಷದಿಂದಿರಲು ಸಾದ್ಯವೇ ಇಲ್ಲ.ತಮ್ಮ ಸುಖ ,ಶಾಂತಿ,ನೆಮ್ಮದಿ ಯನ್ನು ಬದಿಗಿಟ್ಟು ದೇಶವನ್ನು ಕಾಯಲು ಹಗಲಿರುಳು ,ನಿದ್ದೆ ಬಿಟ್ಟು ನಿಲ್ಲುವಂತಹ ಯೋಧರಿಗೆ ಸರಿಸಾಟಿಯಿಲ್ಲ ಎಂದ್ರು