ಹಿರಿಯೂರು ನಗರದ ಜೆರಾಕ್ಸ್ ಅಂಗಡಿಯಲ್ಲಿ ಚಾಲಾಕಿ ಕಳ್ಳನೋರ್ವ ತನ್ನ ಕೈಚಳಕ ತೋರಿರುವ ಘಟನೆ ನಡೆದಿದೆ. ಜೆರಾಕ್ಸ್ ಅಂಗಡಿ ಕ್ಯಾಶ್ ಕೌಂಟರ್ ನಲ್ಲಿದ್ದ ಹಣ ಕದ್ದು ಕಳ್ಳ ಎಸ್ಕೇಪ್ ಆಗಿರುವ ಘಟನೆ ಶುಕ್ರವಾರ ಸಂಜೆ 4 ಗಂಟೆಗೆ ಬೆಳಕಿಗೆ ಬಂದಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ರಂಗ ಜೆರಾಕ್ಸ್ ಅಂಗಡಿಯಲ್ಲಿ ನಡೆದಿದೆ. ಇನ್ನೂ ಖತರ್ನಾಕ್ ಕಳ್ಳನ ಕೈಚಳಕ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.