ಮಳವಳ್ಳಿ : ಕೃಷಿ ಕೂಲಿಕಾರರ ಸಂಘದ ವಲಯ ಮಟ್ಟದ 2ನೇ ಸಮ್ಮೇಳನ ಮಳವಳ್ಳಿ ತಾಲ್ಲೂಕಿನ ಹಲಗೂರು ಗ್ರಾಮದಲ್ಲಿ ಭಾನು ವಾರ ಏರ್ಪಾಡಾಗಿತ್ತು. ಮಧ್ಯಾಹ್ನ 2.30 ರ ಸಮಯದಲ್ಲಿ ಹಲಗೂರಿನ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಏರ್ಪಾಡಾಮಳವಳ್ಳಿ : ಕೃಷಿ ಕೂಲಿಕಾರರ ಸಂಘಗಿದ್ದ ಈ ಸಮ್ಮೇಳನವನ್ನು ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಟಿ ಎಲ್ ಕೃಷ್ಣೇಗೌಡ ಉದ್ಘಾಟಿಸಿದರು. ಮೊದಲಿಗೆ ಸಮ್ಮೇಳನದ ಧ್ವಜಾ ರೋಹಣ ನೆರವೇರಿಸಿ ನಂತರ ಅಗಲಿದ ಕಾರ್ಮಿಕರಿಗೆ ಮೌನಾ ರ್ಪಣೆ ಮೂಲಕ ಗೌರವಾರ್ಪಣೆ ಸಲ್ಲಿಸಲಾಯಿತು. ನಂತರ ಮಾತನಾಡಿದ ಕೃಷ್ಣೇಗೌಡ ಧ್ವನಿಯೇ ಇಲ್ಲದ ಕೃಷಿ ಕೂಲಿ ಕಾರರಿಗೆ ಅದರಲ್ಲೂ ಮಹಿಳಾ ಕೂಲಿಕಾರರನ್ನು ಜಿಲ್ಲೆಯ ಪ್ರತೀ ಹಳ್ಳಿ ಹಳ್ಳಿಗಳಲ್ಲಿ ಸಂಘಟಿಸಿದ ಪ್ರಾಂತ ಕೃಷಿ ಕೂಲಿಕಾರರ ಸಂಘ ಅವರಿಗೆ ಶಕ್ತಿ ತುಂಬಿದೆ ಎಂದರು.