ಕಲಬುರಗಿ : ನಿರಂತರ ಮಳೆಯಿಂದ ತತ್ತರಿಸಿರೋ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಬೆನಕನಹಳ್ಳಿ ಗ್ರಾಮಕ್ಕೆ ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ್ ಹಾಗೂ ಬಿಜೆಪಿ ಮುಖಂಡ ಜಿಕೆ ಪಾಟೀಲ್ ನೇತೃತ್ವದ ತಂಡ ಭೇಟಿ ನೀಡಿ ಗ್ರಾಮಸ್ಥರ ಅಹವಾಲು ಆಲಿಸಿದ್ದಾರೆ.. ಆ23 ರಂದು ಮಧ್ಯಾನ 1 ಗ್ರಾಮಕ್ಕೆ ಭೇಟಿ ನೀಡಿದ ತಂಡ, ಮಳೆಯಿಂದ ಗ್ರಾಮದ ಅನೇಕ ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಪ್ರಮಾಣದಲ್ಲಿ ದವಸಧಾನ್ಯಗಳು, ಮನೆಯಲ್ಲಿನ ವಸ್ತುಗಳು ಹಾಳಾಗಿದ್ದು, ಇದುವರೆಗೆ ಯಾವೊಬ್ಬ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಆಲಿಸಿಲ್ಲ ಅಂತಾ ಮುಖಂಡರ ಮುಂದೆ ಕಷ್ಟ ಹೇಳಿಕೊಂಡರು..