ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕಡಕೋಳ ಗ್ರಾಮದ ಮೀನಾಳ ಸೇತುವೆ ಹತ್ತಿರ ಜರುಗಿದೆ. ಮೃತ ವ್ಯಕ್ತಿಯನ್ನ ಕಡಕೋಳ ಗ್ರಾಮದ ಅಂಬ್ಬಣ್ಣ ಮರಾಠೆ(36) ಎಂದು ಗುರುತಿಸಲಾಗಿದೆ.ಹನಮಂತ ಗೊಂಗನವರ ಎನ್ನುವ ವ್ಯಕ್ತಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಎದುರು ಬರುವ ಬೈಕ್ ಸವಾರ ರವಿ ಮುತ್ತಕ್ಕನ್ನವರ ಹಾಗೂ ಆತನ ತಾಯಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಮಾಹಿತಿ ತಿಳಿದು ಬಂದಿದೆ.ಜಮಖಂಡಿ ಗ್ರಾಮೀಣ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಮುಂದುವರೆಸಿದ್ದಾರೆ.