ಪ್ರಮಾಣಿಕವಾಗಿ ಸಾಲ ಮರುಪಾವತಿ ಮಾಡಿರುವ ರೈತ ಕೂಲಿ ಕಾರ್ಮಿಕರು ಹಾಗೂ ಸ್ತ್ರೀ ಶಕ್ತಿ ಸಂಘಗಳಿಗೆ ಯಾವುದೇ ಷರತ್ತು ಇಲ್ಲದೆ ಸಾಲ ವಿತರಣೆ ಮಾಡಬೇಕೆಂದು ರೈತ ಸಂಘದಿಂದ ಡಿ.ಸಿ.ಸಿ ಬ್ಯಾಂಕ್ ಮುಂದೆ ಬಾರ್ಕೋಲ್ ಚಳುವಳಿ ಮಾಡುವ ಮುಖಾಂತರ ವ್ಯವಸ್ಥಾಪಕರಿಗೆ ಶುಕ್ರವಾರ ಮಧ್ಯನ 3ಗಂಟೆಯಲ್ಲಿ ಮನವಿ ನೀಡಿ ಒತ್ತಾಯಿಸಲಾಯಿತು. ಲಕ್ಷಾಂತರ ರೈತ ಕೂಲಿ ಕಾರ್ಮಿಕರು ಹಾಗೂ ಮಹಿಳೆಯರನ್ನು ಮೀಟರ್ ಬಡ್ಡಿ ದಂದೆಯಲ್ಲಿ ರಕ್ತ ಹೀರುತ್ತಿದ್ದ ಖಾಸಗಿ ಪೈನಾನ್ಸ್ಗಳಿಂದ ರಕ್ಷಣೆ ಮಾಡಿ ಕಡಿಮೆ ಬಡ್ಡಿದರದಲ್ಲಿ ೧ ಲಕ್ಷದಿಂದ ೧೦ ಲಕ್ಷದವರೆಗೆ ಕೃಷಿ ಹಾಗೂ ಸ್ತ್ರೀ ಶಕ್ತಿ ಸಂಘಗಳಿಗೆ ಸಾಲವನ್ನು ನೀಡಿದಂತಹ ಜಿಲ್ಲಾ ಸಹಕಾರ ಬ್ಯಾಂಕ್ಗೆ ಶೀಘ್ರದಲ್ಲಿಯೇ ಅದ್ಯಕ್ಷರು ಹಾಗೂ ಆಡಳಿತ ಮಂಡಳಿಯನ್ನು ನೇಮಕ ಮಾಡಲು ಅಧಿಕಾರಿಗಳ