ಹಸು ಹಾಲಿಗೆ ಪೌಡರ್ ಹಾಗೂ ನೀರು ಮಿಶ್ರಣ ಮಾಡುವ ದೃಶ್ಯ ಈಗ ವೈರಲ್ ಆಗಿದೆ. ಹಾಲು ಉತ್ಪಾದಕರ ಸಂಘದ ಸದಸ್ಯೆ ಮನೆಯಲ್ಲೇ ಈ ರೀತಿ ಹಾಲನ್ನ ಕಲಬೆರಕೆ ಮಾಡಿದ ಘಟನೆ ಬೆಳಕಿಗೆ ಬಂದಿದೆ..ನಂಜನಗೂಡು ತಾಲೂಕು ತರಗನಹಳ್ಳಿ ಹಾಲು ಉತ್ಪಾದಕರ ಸಂಘದ ಸದಸ್ಯೆ ಸಾವಿತ್ರಮ್ಮ ಎಂಬವರ ಮನೆಯಲ್ಲಿ ಹಾಲಿಗೆ ಪೌಡರ್ ಹಾಲು ಮಿಶ್ರಣ ಮಾಡಿದ ದೃಶ್ಯವನ್ನ ಸ್ಥಳೀಯರು ಮೊಬೈಲ್ ನಲ್ಲಿ ಸೆರೆಹಿಡಿದು ವೈರಲ್ ಮಾಡಿದ್ದಾರೆ.