ಕಲಬುರಗಿ : ಒಳಮೀಸಲಾತಿಯಿಂದಾಗಿ ಅಲೆಮಾರಿ ಸಮುದಾಯಗಳಿಗೆ ಘೋರ ಅನ್ಯಾಯವಾಗಿದೆ ಅಂತಾ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಅರ್ಜುನ್ ಭದ್ರೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಆ22 ರಂದು ಬೆಳಗ್ಗೆ 11.30 ಕ್ಕೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಒಳಮೀಸಲಾತಿ ಅಲೆಮಾರಿ ಸಮುದಾಯಕ್ಕೆ ಮರಣ ಶಾಸನವಾಗಿದ್ದು, ದಿಕ್ಕಿಲ್ಲದ ಭಿಕ್ಷಾಟನೆ ಮಾಡಿಕೊಂಡು ಬದುಕು ಕಟ್ಟಿಕೊಳ್ತೊದ್ದವರ ತಟ್ಟೆಗೆ ಸರ್ಕಾರ ಕನ್ನ ಹಾಕಿದೆ ಅಂತಾ ಅರ್ಜುನ್ ಭದ್ರೆ ಕಿಡಿಕಾರಿದ್ದಾರೆ..