ಶಿವಮೊಗ್ಗ ನಗರದಲ್ಲಿ ಪೊಲೀಸ್ ಇಲಾಖೆಯಿಂದ ರೂಟ್ ಮಾರ್ಚ್ ಮಾಡಲಾಗಿದೆ. ಮುಂಬರುವ ಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತವಾಗಿ ಕಾನೂನು ಸುವ್ಯವಸ್ಥೆ ಹಾಗೂ ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಹಾಗೂ ವಿಶೇಷ ಕಾರ್ಯಪಡೆಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನೊಳಗೊಂಡಂತಹ ತಂಡ ಬುಧವಾರ ನಗರದಲ್ಲಿ ರೂಟ್ ಮಾರ್ಚ್ ಮಾಡಿದೆ.ಶಿವಮೊಗ್ಗ ನಗರದ ಮಿಳಘಟ್ಟದಿಂದ ಪ್ರಾರಂಭವಾದ ರೂಟ್ ಮಾರ್ಚ್ ಅಣ್ಣ ನಗರ, ಮಂಜುನಾಥ ಬಡಾವಣೆ,ಬಸ್ ಡಿಪೋ ಆರ್ ಎಂಎಲ್ ನಗರ ಸೇರಿದಂತೆ ಪ್ರಮುಖ ರಸ್ತೆಗಳ ಮೂಲಕ ಬಂದು ಬುದ್ಧನಗರದಲ್ಲಿ ಮುಕ್ತಾಯಗೊಂಡಿತು.ಈ ರೂಟ್ ಮಾರ್ಚ್ ನಲ್ಲಿ ವಿಶೇಷ ಕಾರ್ಯಪಡೆಯ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು ಹಾಗೂ ಶಿವಮೊಗ್ಗ ನಗರದ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.