ಮದ್ದೂರು ತಾಲ್ಲೂಕು ಭಾರತೀನಗರದ ಶ್ರೀಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ಕಬ್ಬಿನ ಜಲ್ಲೆಯಿಂದ ವಿಶಿಷ್ಠತೆಯ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಚಾಮುಂಡೇಶ್ವರಿ ದೇವಾಲಯದ ಟ್ರಸ್ಟ್ನ ಪದಾಧಿಖಾರಿಗಳು ವಿಶೇಷವಾದ ಗಣಪನ ಮೂರ್ತಿ ಪ್ರತಿಷ್ಠಾಪಿಸಲು ಕಳೆದ 15 ದಿನಗಳಿಂದ ಯೋಜನೆ ರೂಪಿಸಿದ್ದು, ಮೊದಲು ಕಾರ್ಖಾನೆಯ ಕಾರ್ಮಿಕ ಮುರುಗೇಶ್ ಅವರಿಂದ ಕಬ್ಬಿಣದ ಸರಳುಗಳಿಂದ ಗಣಪತಿ ಆಕಾರವನ್ನು ತಯಾರಿಸಲಾಯಿತು. ನಂತರ ಕೊಳ್ಳೆಗಾಲದ ಕಲಾವಿದ ವಿಜಯ್ ಅವರನ್ನು ಶ್ರೀಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಕರೆಯಿಸಿಕೊಂಡು ಪರಿಸರ ಸ್ನೇಹಿ ಕಬ್ಬಿನ ಗಣೇಶ ಮೂರ್ತಿಯನ್ನು ಮಾಡಿಸಿ ಪ್ರತಿಷ್ಠಾಪಿಸಲಾಗಿದೆ. ಈ ಗಣೇಶ ಮೂರ್ತಿಯನ್ನು ತಯಾರಿಸಲು ಒಂದು ಟನ್ ಕಬ್ಬಿನ ಜಲ್ಲೆಯನ್ನು ಬಳಸಲಾಗಿದ್ದು, ಗಣೇಶ ಮೂರ್ತಿ 10 ಅಡಿ ಉದ್