ರಾಯಚೂರ ಜಿಲ್ಲೆಯ ಲಿಂಗಸುಗೂರ ತಾಲೂಕಿನ ಜಂಗಿ ರಾಂಪುರ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ಮನೆ ಮುಂದೆ ಬಂದಿದ್ದ ನಾಗರಹಾವಿಗೆ ಪೂಜೆಯನ್ನು ಸಲ್ಲಿಸುವ ಮೂಲಕ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದ್ದಾರೆ. ಸುನಿಲ್ ಪವರ್ ಎಂಬುವರ ಮನೆಯ ಮುಂದೆ ನಾಗರಹಾವು ಪ್ರತ್ಯಕ್ಷವಾಗಿದ್ದು ಅದನ್ನು ಕಂಡು ಮನೆಯ ಸದಸ್ಯರು ತೆಂಗಿನ ಕಾಯಿ ಹೊಡೆದು ಪೂಜೆ ಸಲ್ಲಿಸಿ ನಂತರ ಉರಗ ತಜ್ಞರನ್ನು ಕರೆಸಿ, ಸುರಕ್ಷಿತವಾಗಿ ಹಿಡಿದು ಕಾಡಿಗೆ ತೆಗೆದುಕೊಂಡು ಹೋಗಿ ಬಿಡಲಾಗಿದೆ. ಈ ಘಟನೆಯನ್ನು ನೋಡಿದ ಗ್ರಾಮದ ನೂರಾರು ಜನರು ಅಚ್ಚರಿ ವ್ಯಕ್ತಪಡಿಸಿದರು.