ಇವಿಎಂ ಬಿಟ್ಟು ಬ್ಯಾಲೆಟ್ ಪೇಪರ್ ಬಳಕೆ ವಿಚಾರ ಹಾಗು ಬಿಜೆಪಿ ಟೀಕೆ ವಿಚಾರ ಸಂಬಂಧಿಸಿ ವಿಧಾನಸೌಧದಲ್ಲಿ ಶುಕ್ರವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಬ್ಯಾಲೆಟ್ ಪೇಪರ್ ಬಳಕೆ ಮಾಡಬೇಕು ಅನ್ನೋದು ನಮ್ಮ ಉದ್ದೇಶ ಎಂದರು, ನಮ್ಮ ಅನುಭವದ ಮೇಲೆ ನಾವು ತೀರ್ಮಾನ ಮಾಡಿದ್ದೇವೆ ,ಬ್ಯಾಲೆಟ್ ಪೇಪರ್ ಇರಬೇಕು ಅಂತ ಅನೇಕ ದೇಶಗಳು ಬ್ಯಾಲೆಟ್ ಪೇಪರ್ ಬಳಕೆ ಮಾಡುತ್ತಿವೆ ಎಂದರು. ಧರ್ಮಸ್ಥಳ ಕೇಸ್ ನಲ್ಲಿ ಸೋನಿಯಾ ಗಾಂಧಿಗೆ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿ ಮಾತನಾಡಿ, ನಾವು ಎಸ್ಐಟಿ ಮಾಡಿದ್ದೇವೆ, ಅವರೂ ಪೋಲೀಸರೇ ಅಲ್ವಾ, ಎನ್ ಐ ಎ ನಲ್ಲಿ ಇರುವವರೂ ಪೊಲೀಸರೇ ಅಲ್ವೇ? ಎಂದು ಮರು ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ