ಮಾತಾ ಸಂರಕ್ಷಣಾ ಚಳವಳಿ ಪೆರ್ನೆ ಇದರ ವತಿಯಿಂದ ಗೋ ಹತ್ಯೆಯನ್ನು ಖಂಡಿಸಿ ಸೆ.6ರಂದು ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದ ಕಡಂಬುವಿನ ಕಾರ್ಲ ರಾಮದ್ವಾರದ ಬಳಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ದ್ವೇಷ ಭಾಷಣ ಮಾಡಿದ ಆರೋಪದಲ್ಲಿ ಹಿಂದುತ್ವ ಸಂಘಟನೆಯ ಮುಖಂಡ ಗಣರಾಜ್ ಭಟ್ ಕೆದಿಲ ಎಂಬಾತನ ವಿರುದ್ಧ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.