ಧರ್ಮಸ್ಥಳದ ವಿಷಯದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಶಾಸಕ ಎನ್ ಎಚ್ ಕೋನರಡ್ಡಿ ತಿಳಿಸಿದರು. ನವಲಗುಂದದಲ್ಲಿ ಶನಿವಾರ ಮದ್ಯಾಹ್ನ 2 ಗಂಟೆಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಧರ್ಮಸ್ಥಳ ಪವಿತ್ರವಾದ ಸ್ಥಳ, ಬಿಜೆಪಿ ಮುಖಂಡರು ಎಷ್ಟು ಭಾರಿ ಅಲ್ಲಿ ಹೋಗಿದ್ದಾರೆ ಗೋತ್ತಿಲ್ಲ, ನಾವು ಬಹಳಷ್ಟು ಸಲ ಶ್ರದ್ಧೆ ಭಕ್ತಿಯಿಂದ ಹೋಗಿದ್ದೇವೆ. ನಾವು ಆಣೆ ಪ್ರಮಾಣ ಮಾಡಲು ಧರ್ಮಸ್ಥಳ ಹೆಸರು ೆಳೆಸುತ್ತೇವೆ ಎಂದರು.