ಬಸವಣ್ಣನ ವಚನ ಸಾಹಿತ್ಯದ ಸಂದೇಶಗಳು ಆಧುನಿಕ ಸಮಾಜಕ್ಕೆ ಪ್ರಸ್ತುತವಾಗಿವೆ ಎಂದು ಶಾಸಕ ಬಿ.ದೇವೇಂದ್ರಪ್ಪ ಅಭಿಮತ ವ್ಯಕ್ತಪಡಿಸಿದರು. ಮಂಗಳವಾರ ಸಂಜೆ 5 ಗಂಟೆಗೆ ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಸೆ.15. ರಂದು ದಾವಣಗೆರೆಯಲ್ಲಿ ಜರುಗಲಿರುವ ಬಸವ ಸಂಸ್ಕöÈತಿ ಅಭಿಯಾನ ಕಾರ್ಯಕ್ರಮ ಹಿನ್ನೆಲೆ ತಾಲ್ಲೂಕಿಗೆ ಆಗಮಿಸಿದ ‘ಬಸವ ರಥ’ಕ್ಕೆ ಸ್ವಾಗತಿಸಿ ಮಾತನಾಡಿದರು. ರಾಜ್ಯ ಕಾಂಗ್ರೆಸ್ ಸರ್ಕಾರ ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕರನ್ನಾಗಿ ಘೋಷಿಸಿ ಒಂದು ವರ್ಷ ಪೂರೈಸಿದ ಹಿನ್ನೆಲೆ ರಾಜ್ಯವ್ಯಾಪಿ ಬಸವಸಂಸ್ಕೃತಿ ಅಭಿಯಾನ ನಡೆಯಲಿದೆ ಎಂದರು.