ವಿಜಯೇಂದ್ರಗೆ ಬೇರೆ ಬಂಡವಾಳ ಇಲ್ಲ.ಅದಕ್ಕೆ ಈಗ ವಿಜಯೇಂದ್ರ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿದ್ದಾನೆ ಎಂದು ಏಕವಚನದಲ್ಲೆ ವಿಜಯಪುರದಲ್ಲಿ ಸೋಮವಾರ ಮಧ್ಯಾಹ್ನ 3ಗಂಟೆ ಸುಮಾರಿಗೆ ಸಚಿವ ಎಂ ಬಿ ಪಾಟೀಲ ಟಾಂಗ್ ಕೊಟ್ಟಿದ್ದಾರೆ.ಅಲ್ಲದೆ ಮೊದಲು ಇವರೇ ಎಸ್ ಐಟಿ ಯನ್ನ ಸ್ವಾಗತಿಸಿದ್ದರು.ನಮ್ಮ ಜಾಗೆಯಲ್ಲಿ ಅವರು ಇದ್ರೂ ಕೂಡ ಎಸ್ ಐಟಿ ಮಾಡ್ತಿದ್ದರು.ಅಲ್ಲಿ ಮುಸುಕುಧಾರಿ ಹೇಳಿದಂತೆ ಏನು ಸಿಗಲಿಲ್ಲ ಅಂತಾ ದುರಪಯೋಗ ಮಾಡಿಕೊಳ್ಳಲು ಈಗ ಹೊರಟಿದ್ದಾರೆ ಎಂದರು.ನಾವು ಎಸ್ ಐಟಿ ಮಾಡುವ ಮೂಲಕ ಧರ್ಮಸ್ಥಳ ಹಾಗೂ ಧರ್ಮದರ್ಶಿಗಳ ಮೇಲೆ ಕಳಂಕ ಹೊರಿಸುವಂತ ಷಡ್ಯಂತರ ನಡೆದಿತ್ತು.ಅದನ್ನ ನಾವು ಅಳಿಸಿ ಹಾಕಿ ಇನ್ನಷ್ಟು ಧರ್ಮಸ್ಥಳ ಹಾಗೂ ಧರ್ಮಸ್ಥಳದ ಬಗ್ಗೆ ಕಳಂಕ ದೂರ ಮಾಡುವಂತಹ ಕೆಲಸ ನಾವು ಮಾಡಿದ್ದೇವೆ ಎಂದು ಹೇಳಿದರು.