ನಾಯಕನಹಟ್ಟಿ ಹೋಬಳಿಯ ನಾಯಕ ಸಮುದಾಯದ ಬಹು ದಶಕಗಳ ಕನಸಾಗಿದ್ದ ಮಹರ್ಷಿ ವಾಲ್ಮೀಕಿ ಪುತ್ತಳಿ ನಿರ್ಮಾಣ ಕಾಮಗಾರಿಗೆ ಮಂಗಳವಾರ ಬೆಳಿಗ್ಗೆ 10:30ಕ್ಕೆ ಚಾಲನೆ ನೀಡಲಾಯಿತು. ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಬುಧವಾರ ಹಟ್ಟಿ ಮಲ್ಲಪ್ಪ ನಾಯಕ ಸಂಘದ ಪದಾಧಿಕಾರಿಗಳು ಮಹರ್ಷಿ ವಾಲ್ಮೀಕಿಯವರ ಪುತ್ತಳಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು. ಭಾರತ ದೇಶದ ಆದಿಕವಿ ಎಂದೇ ಪ್ರಸಿದ್ಧಿಯಾದ ಮಹರ್ಷಿ ವಾಲ್ಮೀಕಿಯವರು ಬೇಡ ಸಮುದಾಯದ ಪ್ರಥಮ ಪುರುಷರಾಗಿದ್ದಾರೆ.ಅಂತಹ ಮಹಾನ್ ಪುರುಷರ ಪ್ರತಿಮೆಯನ್ನು ನಾಯಕನಹಟ್ಟಿಯಲ್ಲಿ ನಿರ್ಮಾಣ ಮಾಡುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.