ಮೊಳಕಾಲ್ಮುರು:- ತಮ್ಮೇನಹಳ್ಳಿ ಗ್ರಾಪಂ ವ್ಯಾಪ್ತಿಯ ಕರಡಿಹಳ್ಳಿಯಿಂದ ಕಣ್ಣಕುಪ್ಪೆ ಹೋಗುವ ರಸ್ತೆಯಲ್ಲಿನ ಸಿ.ಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು. ಕರಡಿಹಳ್ಳಿಯಿಂದ ಕಣ್ಣಕುಪ್ಪೆ ಹೋಗುವ ರಸ್ತೆಯಲ್ಲಿ ಸಿ. ಡಿ ನಿರ್ಮಾಣದ ಅವಶ್ಯಕತೆ ಇದ್ದು ಇದು ಜನರ ಬಹುದಿನದ ಬೇಡಿಕೆಯಾಗಿತ್ತು ಈ ಹಿನ್ನೆಲೆಯಲ್ಲಿ ಶಾಸಕ ಎನ್ ವೈ ಗೋಪಾಲಕೃಷ್ಣ 30 ಲಕ್ಷ ರೂಪಾಯಿ ವೆಚ್ಚದ ಸಿಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಸ್ಥಳದಲ್ಲಿ ಗುತ್ತಿಗೆದಾರರ ಸಂಘದ ಎಸ್ ಖಾದರ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಇದ್ದರು.