ಮದ್ದೂರು ಪಟ್ಟಣಕ್ಕೆ ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ಭೇಟಿ ನೀಡಿ ಭಾನುವಾರ ನಡೆದ ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ಮೇಲೆ ಕಲ್ಲು ತೂರಾಟ ಮಾಡಿದವರ ಅನ್ಯಕೋಮಿನ ವಿರುದ್ಧ ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ಬಸವರಾಜ್ ಯತ್ನಾಳ್ ಅವರು ಮಾತನಾಡಿದ ಅವರು, ನೀವು ನನಗೆ ಆಶೀರ್ವಾದ ಮಾಡಿದರೆ ರಾಜ್ಯಾದ್ಯಂತ ಇರುವ ಅಕ್ರಮ ಮಸೀದಿಗಳನ್ನು ನಿಲ್ಲಿಸುತ್ತೇನೆ. ರಾಜ್ಯದಲ್ಲಿ ಬುಲ್ಡೋಜರ್ ಬಾಬಾ ಬೇಕೋ, ಬೇಡವೋ ಎಂದು ಕಾರ್ಯಕರ್ತರನ್ನು ಪ್ರಶ್ನಿಸಿದರು. ಸಿದ್ದರಾಮಯ್ಯ ಸರ್ಕಾರ ಔರಂಗಜೇಬನ ಸರ್ಕಾರವಾಗಿದೆ. ಸಾಬರಿಗೆ ಮೀಸಲಾತಿ ನೀಡಿದ್ದಾರೆ. ಹಿಂದೂಗಳು ಇನ್ನು ಮುಂದೆ ಜಾತಿ ನೋಡಿ ಮತ ಹಾಕಬೇಡಿ. ಆತ ಹಿಂದೂ ಧರ್ಮ ಉಳಿಸುತ್ತಾನೆ ಎಂದರೆ ಮತ ನೀಡಿ ಎಂದು ಹೇಳಿದರು.