ಕಲಬುರಗಿ : ಕಲಬುರಗಿ ಜಿಲ್ಲೆಯಾದ್ಯಂತ ಮಳೆ ಆರ್ಭಟ ಕಳೆದೆರಡು ದಿನಗಳಿಂದ ಮತ್ತೆ ಆರಂಭವಾದ ಪರಿಣಾಮ ಚಿತ್ತಾಪುರ ತಾಲೂಕಿನ ದೇವಾಪುರ ಗ್ರಾಮದ ಬಳಿ ಹಿರೇಹಳ್ಳ ಉಕ್ಕಿ ಹರಿಯುತ್ತಿದ್ದು, ಸೊಂಟದವರೆಗಿನ ನೀರಿನಲ್ಲೆ ಜನ ನಡೆದುಕೊಂಡು ಹೋಗ್ತಿದಾರೆ.. ಸೆಪ್ಟೆಂಬರ್ 12 ರಂದು ಸಂಜೆ 4 ಗಂಟೆಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.. ಹಿರೇಹಳ್ಳ ಉಕ್ಕಿ ಹರಿಯುತ್ತಿರುವ ಪರಿಣಾಮ ರಸ್ತೆ, ಸೇತುವೆಗಳು ಮುಳುಗಡೆಯಾಗಿದ್ದು, ಸೊಂಟದವರೆಗಿನ ಹಳ್ಳದಲ್ಲೆ ಪುಟ್ಟ ಪುಟ್ಟ ಶಾಲಾ ವಿದ್ಯಾರ್ಥಿಗಳು ನಡೆದುಕೊಂಡು ಹೋಗ್ತಿದ್ದು, ಕೊಂಚ ಯಾಮಾರಿದ್ರು ಅಪಾಯ ಕಟ್ಟಿಬುತ್ತಿಯಾಗಿದೆ