ಮಳೆಗಾಲದಲ್ಲೂ ಕೂಡ ಗದಗ-ಬೆಟಗೇರಿ ಅವಳಿ ನಗರದಲ್ಲಿ ನೀರಿನ ಸಮಸ್ಯೆ ಸಾರ್ವಜನಿಕರನ್ನು ಬೆಂಬಿಡದ ಭೂತದಂತೆ ಕಾಡುತ್ತಿದೆ. ಈ ಬಗ್ಗೆ ಮಾಧ್ಯಮದವರು ಸಚಿವ ಎಚ್ ಕೆ ಪಾಟೀಲರನ್ನು ಪ್ರಶ್ನಿಸಿದಾಗ ಅದೆಲ್ಲವೂ ಸುಳ್ಳು, ಬೋಗಸ್ ಅಂತ ಹೇಳಿ ಕೈ ತೊಳೆದುಕೊಂಡರು. ಈ ಮೂಲಕ 15-20 ದಿನಗಳಿಗೊಮ್ಮೆ ನೀರು ಕುಡಿಯುವ ಸಾರ್ವಜನಿಕರಿಗೆ ಅವರು ಸುಳ್ಳು ಹೇಳಿದ್ರಾ ಎನ್ನುವ ಪ್ರಶ್ನೆ ಕಾಡುತ್ತಿದೆ.