ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿರುವ ಕ್ರೈಸ್ ವಸತಿ ಶಾಲೆಯ ಡಿ ಗ್ರೂಪ್ ನೌಕರರು ತಮ್ಮ ಆರು ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ಆಗಸ್ಟ್ 28 ರಂದು ಹಮ್ಮಿಕೊಂಡಿದ್ದ ಮುಷ್ಕರವನ್ನು ಮುಂದೂಡಲಾಗಿದೆ ಎಂದು ಟಿಯುಸಿಐ ರಾಜ್ಯ ಉಪಾಧ್ಯಕ್ಷ ಎಂ.ಗಂಗಾಧರ್ ತಿಳಿಸಿದ್ದಾರೆ, ಬುಧವಾರ ಮಧ್ಯಾನ ಸಿಂಧನೂರಿನಲ್ಲಿ ಈ ಕುರಿತು ಹೇಳಿಕೆ ನೀಡಿ, ಸಪ್ಟೆಂಬರ್ 2ರಂದು ಅಧಿಕಾರಿಗಳು ಸಭೆ ನಡೆಸಿ ಬೇಡಿಕೆ ಇಡೇರಿಸುವ ಭರವಸೆ ಇರುವುದರಿಂದ ಮುಷ್ಕರ ಮುಂದೂಡಲಾಗಿದೆ.ಬೇಡಿಕೆಗಳು ಈಡೇರಿಸದಿದ್ದಲ್ಲಿ ಮತ್ತೆ ಮುಷ್ಕರವನ್ನು ನಡೆಸಲಾಗುವುದು ಎಂದು ತಿಳಿಸಿದರು.