ಕಲಬುರಗಿ : ಕಲಬುರಗಿ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆ ಮುಂದುವರಿಯುತ್ತಿದ್ದು, ಚಿಂಚೋಳಿ ತಾಲೂಕಿನಲ್ಲಿ ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ಅನೇಕ ಹಳ್ಳಕೊಳ್ಳಗಳು, ಸೇತುವೆಗಳು, ರಸ್ತೆಗಳು, ಬ್ರೀಡ್ಜ್ ಕಂ ಬ್ಯಾರೇಜ್ ಮುಳುಗಡೆಯಾಗಿವೆ.. ಗಾರಂಪಳ್ಳಿ ಗ್ರಾಮದ ಬಳಿ ಬ್ರೀಡ್ಜ್ ಕಂ ಬ್ಯಾರೇಜ್ ಜಲಾವೃತವಾಗಿದ್ದು, ಜಲಾವೃತವಾದ ಸೇತುವೆ ಮೇಲೆಯೇ ಜನರ ವಾಹನಗಳನ್ನ ಓಡಿಸುತ್ತ ನಡೆದುಕೊಂಡು ಹೋಗುತ್ತಾ ದುಸ್ಸಾಹಾಸ ಮೆರೆಯುತ್ತಿದ್ದಾರೆ..ಸೆ22 ರಂದು ಬೆಳಗ್ಗೆ 8 ಗಂಟೆಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ