ನಾನೊಬ್ಬ ಆಡಳಿತ ಪಕ್ಷದ ಶಾಸಕನಾಗಿ ಹೇಳಿಕೊಳ್ಳಲು ನಾಚಿಕೆಯಾಗುತ್ತದೆ. ಕಡ್ಡಿ ಕಳ್ಳಿ ಬೆಳೆದಿರುವ ಜಾಗವನ್ನು ಕೂಡ ನಮ್ಮದು ಎನ್ನುತ್ತಿದ್ದಾರೆ. 22 ಕೋಟಿ ರೂಪಾಯಿಯಲ್ಲಿ ಅದ್ಭುತವಾದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಬಹುದಿತ್ತು. ಕಸ ಗುಡಿಸಲು ಬಳಸುವ ಹಂಗಾರಕಟ್ಟೆಗೆ ಬೆಳೆಯುವ ಪ್ರದೇಶವನ್ನು ಕೂಡ ಡಿಮ್ಡ್ ಫಾರೆಸ್ಟ್ ಎನ್ನುತ್ತಿದ್ದು. ಅರಣ್ಯ ಇಲಾಖೆಯವರು ಆಕಾಶದಿಂದ ಬಂದವರಂತೆ ಆಡುತ್ತಿದ್ದಾರೆ. ಡಿಸಿ ಯವರು ನಾನು ಕೂಡ ಸ್ಥಳಕ್ಕೆ ಹೋಗಿ ಭೇಟಿ ನೀಡಿ 5 ಎಕರೆ ಜಾಗವನ್ನು ಕೊಡುವಂತೆ ಕೇಳಿದ್ದರೂ ಕೂಡ ಹಿಂದೂ ಮುಂದು ನೋಡುತ್ತಿದ್ದಾರೆ ಎಂದು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ತಮ್ಮಯ್ಯ ಅರಣ್ಯ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸಿದರು.