ಸೆ. 4ರಂದು ಬೆಳಿಗ್ಗೆ 9ಕ್ಕೆ ಇಲ್ಲಿನ ಸಾಯಿಬಾಬಾ ದೇವಸ್ಥಾನ ಹಾಗೂ ಪಂಚಮುಖಿ ಹನುಮಾನ ದೇವಸ್ಥಾನ ಕಳಸಾರೋಹಣ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ವಿನೋದ ಜಾಜಿ ತಿಳಿಸಿದರು. ಸೆ. 4ಕ್ಕೆ ಕಾರ್ಯಕ್ರಮ ನಡೆಯುವ ಹಿನ್ನೆಲೆಯಲ್ಲಿ ಪಟ್ಟಣದ ಸಾಯಿಬಾಬಾ ಮಂದಿರದಲ್ಲಿ ಬುಧವಾರ ಮಧ್ಯಾನ 3ಕ್ಕೆ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ವಿವರಿಸಿದರು. ಗೌರವಾಧ್ಯಕ್ಷ ವೀರೇಶ ಜಾಜಿ, ಉಪಾಧ್ಯಕ್ಷ ವಿವೇಕ ವಾಲಿ, ಕಾರ್ಯದರ್ಶಿ ವಿನಾಯಕ ರಘೋಜಿ ಹಾಗೂ ಸದಸ್ಯರಿದ್ದರು.