ತಮ್ಮ ಕುಟುಂಬದ ಎರಡನೇ ಮಗನನ್ನೇ ಹೆತ್ತವರು ಡಿಸೈಲ್ ಸುರಿದು ಬೆಂಕಿ ಹೆಚ್ಚಿ ಕೊಲೆ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಬಿದರಿ ಗ್ರಾಮದ ತೋಟದ ಮನೆಯಲ್ಲಿ ನಡೆದಿದೆ.ಕೊಲೆಯಾದ ದುರ್ದೈವಿಯನ್ನ ಕಾನಟ್ಟಿ ಕುಟುಂಬದ ಅನೀಲ.ಪರಪ್ಪ.ಕಾನಟ್ಟಿ (32) ಎಂದು ಗುರ್ತಿಸಲಾಗಿದೆ.ಇನ್ನು ಕೊಲೆಯಾದ ವ್ಯಕ್ತಿ ಸಾರಾಯಿ ಚಟಕ್ಕೆ ಅಂಟಿಕೊಂಡಿದ್ದು,ಮೇಲಿಂದ ಮೇಲೆ ಕುಟುಂಬದ ಸದಸ್ಯರೊಂದಿಗೆ ಜಗಳ ತೆಗೆಯುತ್ತಿದ್ದನಂತೆ. ಕಳೆದ ಸೆಪ್ಟೆಂಬರ್ 5. ರ ರಾತ್ರಿ ಹೊತ್ತು ಕೂಡ ಸಾರಾಯಿ ಕುಡಿದ ಅಮಲಿನಲ್ಲಿ ಕುಟುಂಬದ ಸದಸ್ಯರೊಂದಿಗೆ ಜಗಳ ತೆಗೆದಿದ್ದಾನೆ,ಈ ವೇಳೆ ರೊಚ್ವಿಗೆದ್ದ ಕುಟುಂಬಸ್ಥರು ಹಗ್ಗದಿಂದ ಕುತ್ತಿಗೆ, ಕೈ-ಕಾಲು ಕಟ್ಟಿ ,ಡಿಸೈಲ್ ಸುರಿದು ಬೆಂಕಿ ಹಚ್ಚಿದ್ದಾರೆಂದು ತಿಳಿದು ಬಂದಿದೆ.