ಸಚಿವ ಸತೀಶ್ ಜಾರಕಿಹೊಳಿ ಅಮೃತ ಹಸ್ತದಿಂದ ನಲ್ಲೂರು ಸೇತುವೆಗಳ ಲೋಕಾರ್ಪಣೆ: ಇಂದು ಶಾಸಕಿ ಎಂ.ರೂಪಕಲಾ ರಿಂದ ಪರಿಶೀಲನೆ ಬೇತಮಂಗಲ ಹೋಬಳಿಯ ಟಿ.ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿಯ ನಲ್ಲೂರು ಗ್ರಾಮದ ಬಳಿ ಬೇತಮಂಗಲ ಕೆರೆಗೆ ನೀರು ಹರಿಯುವ ಪಾಲಾರ್ ಹೊಳೆಗೆ ಹೊಸದಾಗಿ ನಿರ್ಮಾಣವಾಗಿರುವ ಸೇತುವೆಯ ಕಾಮಗಾರಿಗಳ ಲೋಕಾರ್ಪಣೆಯ ಸಿದ್ಧತೆಯನ್ನು ಶಾಸಕಿ ಎಂ.ರೂಪಕಲಾ ರವರು ಮಂಗಳವಾರ ಪರಿಶೀಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಥಳೀಯರು ಸೇತುವೆ ಎತ್ತರಿಸಲು ಮನವಿ ಮಾಡಿದ್ದು ಹೊಸದಾಗಿ ಎರಡು ಸೇತುವೆ ನಿರ್ಮಾಣ ಮಾಡಲು ರೂ.೬.೦೦ ಕೋಟಿ, ಬಡಮಾಕನಹಳ್ಳಿ ಬಳಿ ಒಂದು ಸೇತುವೆ ಹಾಗೂ ಸಂಪರ್ಕ ರಸ್ತೆಗೆ ೪ ಕೋಟಿ ರೂ ಸೇರಿ ಒಟ್ಟು ೧೦ ಕೋಟಿ ರೂಪಾಯಿ